ಏನು ಹೀಗೆ ಅಂದರೆ ? ನಮ್ಮ ದೃಷ್ಟಿಯಲ್ಲಿ ನಾವು ಗೌರವಾನ್ವಿತರಾಗಿ ಉಳಿಯುವುದು. ಯಾವುದೇ ಕೆಟ್ಟ ಹಾದಿಯಲ್ಲಿ ನಡೆಯದೇ ನಮ್ಮತನವನ್ನು ಉಳಿಸಿ ಕೊಳ್ಳುವುದು. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸೆಲ್ಫ ರೆಸ್ಪೆಕ್ಟ ಅಂತಾರೆ. ನಮಗೆ ನಾವೇ ಬೆಲೆ ಕೊಡದೇ ಇದ್ದರೆ ಬೆರೆಯವ್ರು ಹೇಗೆ ಕೊಟ್ಟಾರು ಅಲ್ಲವೇ? ವ್ಯಕ್ತಿ ಹೆಣ್ಣೆ ಇರಲಿ ಗಂಡೇ ಇರಲಿ ಬೇರೆಯವರ ಅಡಿ ಆಳು ಅಥವಾ ಬೇರೆಯವರ ಕೈಗೊಂಬೆಯಾಗಿ ಬಾಳುವುದಕ್ಕಿಂತ ಕಷ್ಟ ಪಟ್ಟು ದುಡಿದು ಆತ್ಮ ಗೌರವದಿಂದ ಬದುಕುವುದು ಉತ್ತಮ ಜೀವನ. ಮತ್ತೊಬ್ಬರ ಹಂಗಿನಲ್ಲಿ ನಮಗೆ ಯಾವುದೇ ಬೆಲೆ ಇಲ್ಲದೇ ಬದುಕುವ ಬದುಕು ಹೀನವಾದುದು. ನಮ್ಮತನವಿಲ್ಲದೇ ಒಂದು ಕೀಲು ಗೊಂಬೆಯಾಗಿ ಬಾಳುವುದು, ಮತ್ತೊಬ್ಬರ ಕೈ ಗೊಂಬೆಯಾಗುವುದಕ್ಕಿಂತ ಆತ್ಮ ಗೌರವದಿಂದ ಸಾಯುವುದು ಲೇಸು
ಇಂದಿನ ಪ್ರಪಂಚದಲ್ಲಿ ಈ ರೀತಿ ಆತ್ಮ ಗೌರವದಿಂದ ಬದುಕಲು ಪ್ರಯತ್ನಿಸುವವರು ಔಟ್‌ಡೇಟೆಡ್ ಎಂಬ ಭಾವನೆ ಇದೆ. ಯಾಕೆಂದರೆ ಎಲ್ಲರೂ ಹೊಗಳು ಭಟ್ಟರು, ಕಾರ್ಯವಾಸಿ ಕತ್ತೆ ಕಾಲು ಹಿಡಿಯಬಹುದೆಂಬ, ಅಥವಾ ಹಣ ಅಧಿಕಾರ ಇರುವವರು ತಾವು ಏನನ್ನಾದರೂ ಕೊಂಡು ಕೊಂಡೇವು ಎನ್ನುವ ಸೊಕ್ಕು ಮಾತನಾಡಿಸುತ್ತದೆ. ಯಾವುದೇ ಸಂಬಂಧವಿರಲಿ ವ್ಯಕ್ತಿ ಇರಲಿ ಪರಸ್ಪರ ಗೌರವ, ವಿಶ್ವಾಸವಿದ್ದಾಗ ಮಾತ್ರ ಜೀವನ ಸುಗಮ.
ಹೆಣ್ಣು ಮಕ್ಕಳಂತೂ ಹೆಜ್ಜೆ ಹೆಜ್ಜೆಗೂ ಆತ್ಮ ಸಮ್ಮಾನ ಅಥವಾ ಗೌರವಕ್ಕಾಗಿ ಹೋರಾಡುವ ಪರಿಸ್ಥಿತಿ ದಿನ ನಿತ್ಯವೂ ಇದೆ. ಸಾಮಾಜ ಹೆಣ್ಣಿಗೆ ಕ್ಷಮಯಾ ಧರಿತ್ರಿ ಅಂತ ಕಲಿಸಲು ಪ್ರಯತ್ನಿಸುತ್ತದೆ ಆದರೆ ಗಂಡಿನ ರಾವಣ ಕಂಸನಾಗ ಬೇಡ ಎನ್ನುವುದಿಲ್ಲ. ಇರಲಿ ಹೊಂದಿಕೊಂಡು ಹೋಗು ಅನ್ನುವುದು ಸರ್ವೇ ಸಾಮಾನ್ಯ ಹಾಗೆಂದು ದಬ್ಬಾಳಿಕೆಯನ್ನು ಮಾಡದ ಹೆಣ್ಣು ಮಕ್ಕಳಿದ್ದಾರೆ ಎಂದುಕೊಳ್ಳಬೇಡಿ ಅವರ ಸಂಖ್ಯೆಯೂ ಕಡಿಮೆ ಇಲ್ಲ.
ಆದರೆ ಆತ್ಮಗೌರವನ್ನು ಹೆಣ್ಣಾಗಲಿ ಗಂಡಾಗಲಿ ಬಿಡಬಾರದು. ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರಬಾರದು. ಸ್ವಾಭಿಮಾನವನ್ನು ಬಿಟ್ಟು ಬದುಕಿದರೆ ಜೀವಂತ ಶವಕ್ಕೆ ಸಮ
ಮಾಧುರಿ
No comments:
Post a Comment