Saturday, April 25, 2020

ವಿಶ್ವ ಪುಸ್ತಕದಿನ



ಇಂದು ಏಪ್ರಿಲ್‌ 23 ವಿಶ್ವ ಪುಸ್ತಕದಿನ.  ಪುಸ್ತಕಗಳು ನಮ್ಮ ಜೀವನದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತವೆ. ನಾವು ಸಣ್ಣವರಿದ್ದಾಗ ಅನಿವಾರ್ಯವಾಗಿ ಪಠ್ಯ ಪುಸ್ತಕಗಳನ್ನು ಓದುತ್ತೇವೆ.  ಓದುವುದು ಹವ್ಯಾಸವಾಗಿ ಬೆಳೆದಾಗ ಪುಸ್ತಕಕ್ಕಿಂತ ದೊಡ್ಡ ಮಿತ್ರ ಬೇರೆ ಯಾವುದೂ ಇಲ್ಲ.  ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಪುಸ್ತಕಗಳು ಪ್ರಾಚೀನ ಕಾಲದಲ್ಲೂ ಪ್ರಚಲಿತವಿದ್ದವು.  ತಾಳೆಗರಿಯ ಪುಸ್ತಕ, ತಗಡಿನಲ್ಲಿ ಕೆತ್ತನೆ ಹೀಗೆ ಅನೇಕ ಪುಸ್ತಕಗಳು ಹಸ್ತ ಪ್ರತಿಯಲ್ಲಿ ನಮಗೆ ಲಭ್ಯವಿದೆ.

ವಿಜ್ಞಾನದ ವಿಕಾಸವಾದಂತೆ ಮುದ್ರಣಾಲಯದಲ್ಲಿ ಕಾಗದದ ಮೇಲೆ ಮುದ್ರಣ ಪ್ರಾರಂಭವಾದಾಗ ಪುಸ್ತಕಗಳಿಗೆ ಸಾಹಿತಿಗಳಿಗೆ ಬಹಳಷ್ಟು ಬೇಡಿಕೆ ಆರಂಭವಾಯಿತು ಬ್ರಿಟಿಷರ ಕಾಲದಲ್ಲಿ ಎಲ್ಲ ಭಾಷೆಗಳಲ್ಲೂ ಸಾಹಿತ್ಯ ಮತ್ತು ಸಂಸ್ಕೃತಿ, ಇತಿಹಾಸ ಎಲ್ಲ ಬಗೆಯ ವಿಚಾರಗಳ ಬಗೆಗೆ ಪುಸ್ತಕಗಳು ಪ್ರಕಟವಾಗಲು ಪ್ರಾರಂಭವಾಯಿತು.  ಲೇಖಕರಿಗೆ ಸಿಗುವ ಹಣವೆಷ್ಟೋ ತಿಳಿದಿಲ್ಲ ಆದರೆ ಪುಸ್ತಕಗಳು ಸಾರ್ವಕಾಲಿಕವಾಗಿ ಜ್ಞಾನದ ಭಂಡಾರಗಳು.

ಇಂದಿನ ದಿನದಲ್ಲಿ ಪುಸ್ತಕಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪುಸ್ತಕಗಳ ಕಾಲ ಬಂದಿಗೆ ಅಂತರ್ಜಾಲದಲ್ಲಿ ತಮ್ಮ ಪುಸ್ತಕಗಳನ್ನು ಕೆಲವರು ಯಾವುದೇ ಶುಲ್ಕವಿಲ್ಲದೇ ಇನ್ನು ಕೆಲವರು ಸ್ವಲ್ಪ ಪ್ರಮಾಣದ ಶುಲ್ಕವನ್ನು ಪಡೆದು ಪುಸ್ತಕಗಳನ್ನು ಅನುಮತಿಸುತ್ತಾರೆ.  ತಾಳೆಗರಿಯ  ಕಾಲದಿಂದ ಹಿಡಿದು ಇಂದಿನ ಈ-ಪುಸ್ತಕದವರೆಗೂ ಪುಸ್ತಕಗಳು ಯಾವುದೇ ರೂಪದಲ್ಲಿ ಇರಲಿ. ಜ್ಞಾನದ ಭಂಡಾರ, ಮಾಹಿತಿಗಳ ಆಗರ, ಮನರಂಜನೆಯ ಸಾಧನವಾಗಿರುವುದು ಪುಸ್ತಕವೇ

ಬನ್ನಿ ಎಲ್ಲರೂ ಪುಸ್ತಕವನ್ನು ಓದೋಣ. ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ. ಈ ಲಾಕ್‌ಡೌನ್‌ ಸಂದರ್ಭದಲ್ಲಿ  ಫೇಸ್‌ ಬುಕ್‌ ನಲ್ಲಿ ಮನೆಯಲ್ಲಿಯೇ ಕುಳಿತು ತಮ್ಮ ಸ್ನೇಹಿತರೊಂದಿಗೆ ಪುಸ್ತಕ ಓದುವ ಸವಾಲನ್ನು ಹಾಕಿದವರೂ ಇದ್ದಾರೆ. ಬೇರೇ ಯಾರದೋ ಸಲುವಾಗಿ ಅಲ್ಲ ನಮ್ಮ ಸಲುವಾಗಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪುಸ್ತಕವನ್ನು ಓದೋಣ.

ಎಲ್ಲ ಮಿತ್ರರಿಗೂ ವಿಶ್ವ ಪುಸ್ತಕ ದಿನದ ಹಾರ್ದಿಕ ಶುಭಾಶಯಗಳು

ಮಾಧುರಿ

No comments:

Post a Comment