Saturday, April 25, 2020

ವಿಶ್ವ ಪುಸ್ತಕದಿನ



ಇಂದು ಏಪ್ರಿಲ್‌ 23 ವಿಶ್ವ ಪುಸ್ತಕದಿನ.  ಪುಸ್ತಕಗಳು ನಮ್ಮ ಜೀವನದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತವೆ. ನಾವು ಸಣ್ಣವರಿದ್ದಾಗ ಅನಿವಾರ್ಯವಾಗಿ ಪಠ್ಯ ಪುಸ್ತಕಗಳನ್ನು ಓದುತ್ತೇವೆ.  ಓದುವುದು ಹವ್ಯಾಸವಾಗಿ ಬೆಳೆದಾಗ ಪುಸ್ತಕಕ್ಕಿಂತ ದೊಡ್ಡ ಮಿತ್ರ ಬೇರೆ ಯಾವುದೂ ಇಲ್ಲ.  ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಪುಸ್ತಕಗಳು ಪ್ರಾಚೀನ ಕಾಲದಲ್ಲೂ ಪ್ರಚಲಿತವಿದ್ದವು.  ತಾಳೆಗರಿಯ ಪುಸ್ತಕ, ತಗಡಿನಲ್ಲಿ ಕೆತ್ತನೆ ಹೀಗೆ ಅನೇಕ ಪುಸ್ತಕಗಳು ಹಸ್ತ ಪ್ರತಿಯಲ್ಲಿ ನಮಗೆ ಲಭ್ಯವಿದೆ.

ವಿಜ್ಞಾನದ ವಿಕಾಸವಾದಂತೆ ಮುದ್ರಣಾಲಯದಲ್ಲಿ ಕಾಗದದ ಮೇಲೆ ಮುದ್ರಣ ಪ್ರಾರಂಭವಾದಾಗ ಪುಸ್ತಕಗಳಿಗೆ ಸಾಹಿತಿಗಳಿಗೆ ಬಹಳಷ್ಟು ಬೇಡಿಕೆ ಆರಂಭವಾಯಿತು ಬ್ರಿಟಿಷರ ಕಾಲದಲ್ಲಿ ಎಲ್ಲ ಭಾಷೆಗಳಲ್ಲೂ ಸಾಹಿತ್ಯ ಮತ್ತು ಸಂಸ್ಕೃತಿ, ಇತಿಹಾಸ ಎಲ್ಲ ಬಗೆಯ ವಿಚಾರಗಳ ಬಗೆಗೆ ಪುಸ್ತಕಗಳು ಪ್ರಕಟವಾಗಲು ಪ್ರಾರಂಭವಾಯಿತು.  ಲೇಖಕರಿಗೆ ಸಿಗುವ ಹಣವೆಷ್ಟೋ ತಿಳಿದಿಲ್ಲ ಆದರೆ ಪುಸ್ತಕಗಳು ಸಾರ್ವಕಾಲಿಕವಾಗಿ ಜ್ಞಾನದ ಭಂಡಾರಗಳು.

ಇಂದಿನ ದಿನದಲ್ಲಿ ಪುಸ್ತಕಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪುಸ್ತಕಗಳ ಕಾಲ ಬಂದಿಗೆ ಅಂತರ್ಜಾಲದಲ್ಲಿ ತಮ್ಮ ಪುಸ್ತಕಗಳನ್ನು ಕೆಲವರು ಯಾವುದೇ ಶುಲ್ಕವಿಲ್ಲದೇ ಇನ್ನು ಕೆಲವರು ಸ್ವಲ್ಪ ಪ್ರಮಾಣದ ಶುಲ್ಕವನ್ನು ಪಡೆದು ಪುಸ್ತಕಗಳನ್ನು ಅನುಮತಿಸುತ್ತಾರೆ.  ತಾಳೆಗರಿಯ  ಕಾಲದಿಂದ ಹಿಡಿದು ಇಂದಿನ ಈ-ಪುಸ್ತಕದವರೆಗೂ ಪುಸ್ತಕಗಳು ಯಾವುದೇ ರೂಪದಲ್ಲಿ ಇರಲಿ. ಜ್ಞಾನದ ಭಂಡಾರ, ಮಾಹಿತಿಗಳ ಆಗರ, ಮನರಂಜನೆಯ ಸಾಧನವಾಗಿರುವುದು ಪುಸ್ತಕವೇ

ಬನ್ನಿ ಎಲ್ಲರೂ ಪುಸ್ತಕವನ್ನು ಓದೋಣ. ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ. ಈ ಲಾಕ್‌ಡೌನ್‌ ಸಂದರ್ಭದಲ್ಲಿ  ಫೇಸ್‌ ಬುಕ್‌ ನಲ್ಲಿ ಮನೆಯಲ್ಲಿಯೇ ಕುಳಿತು ತಮ್ಮ ಸ್ನೇಹಿತರೊಂದಿಗೆ ಪುಸ್ತಕ ಓದುವ ಸವಾಲನ್ನು ಹಾಕಿದವರೂ ಇದ್ದಾರೆ. ಬೇರೇ ಯಾರದೋ ಸಲುವಾಗಿ ಅಲ್ಲ ನಮ್ಮ ಸಲುವಾಗಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪುಸ್ತಕವನ್ನು ಓದೋಣ.

ಎಲ್ಲ ಮಿತ್ರರಿಗೂ ವಿಶ್ವ ಪುಸ್ತಕ ದಿನದ ಹಾರ್ದಿಕ ಶುಭಾಶಯಗಳು

ಮಾಧುರಿ

ಸಂಬಂಧಗಳು



ನಾವು ಹುಟ್ಟಿನಿಂದ ಬರುವ ಸಂಬಂಧಗಳು ಕೆಲವಾದರೆ, ನಾವು ಬೆಳೆಸಿಕೊಳ್ಳುವ ಸಂಬಂಧಗಳು ಇನ್ನು ಕೆಲವು. ಸಂಬಂಧ ಯಾವುದೇ ಇರಲಿ ಅವುಗಳಲ್ಲಿ ಪ್ರೀತಿ ವಿಶ್ವಾಸ ಬಹಳಮುಖ್ಯ.  ದೇವರು ಕೊಟ್ಟ ಸಂಬಂಧಗಳೆಂದರೆ ತಂದೆ-ತಾಯಿ, ರಕ್ತ ಸಂಬಂಧಿಗಳು, ಮದುವೆಯಾದ ನಂತರ ಬರುವುದು ನಾವು ಮಾಡಿಕೊಳ್ಳುವ ಸಂಬಂಧಗಳು ಬಂಧುಗಳು ಬಾಂಧವರು.

ಎಲ್ಲ ರೀತಿಯ ಸಂಬಂಧಗಳಿಗೂ ಅದರದೇ ಆದ ಮಹತ್ವವಿರುತ್ತದೆ. ಏಕೆಂದರೆ ಮನುಷ್ಯ ಸಮಾಜ ಜೀವಿ. ಮನೆಯಲ್ಲಿಯ ಜನರು ಬೇಸರ ಎಂದರೂ ಸ್ನೇಹಿತರಾದರೂ ಇದ್ದೆ ಇರುತ್ತಾರೆ. ಯಾವುದೇ ಜನರ ಸಹವಾಸ ಬೇಡವೆಂದು ಬದುಕುವ  ಗೂಬೆಯಂತೆ ಬದುಕುವ ಜನರು ನೂರಕ್ಕೆ 2-3 ಇರಬಹುದಷ್ಟೆ

ಸಾಮಾಜಿಕವಾಗಿ ಮನುಷ್ಯ ಸಂಗಜೀವಿ ಜನರ ಮಧ್ಯ, ಜನರೊಂದಿಗೇ ಇರುತ್ತಾನೆ, ಸಂಬಂಧಗಳನ್ನು ಬೆಳೆಸುತ್ತಾನೆ ಅವರ ಸಂಪರ್ಕದಿಂದ ಸಂತೋಷ ದುಃಖ ಅನೇಕ ಭಾವನೆಗಳನ್ನೂ ಜೀವಿಸುತ್ತಾನೆ.  ಆಧ್ಯಾತ್ಮಿಕವಾಗಿ ಸಂಬಂಧಗಳನ್ನು ವಿಶ್ಲೇಷಣೆ ಮಾಡಿದಾಗ  ಸಂಬಂಧ ಎಂದರೆ ಬಂಧನದ ಕಾರಣ ಮೋಹದ ಕಾರಣ ಎನ್ನಲಾಗುತ್ತದೆ. ಯಾವುದೇ ವ್ಯಕ್ತಿಯ ಸಂಪರ್ಕದಲ್ಲಿ ನಾವು ಬಂದಿದ್ದೇವೆಯೆಂದರೆ ಅವರಿಗೂ ನಮಗೂ ಋಣಾನುಬಂಧವಿರುತ್ತದೆ. ಹಿಂದಿನ ಜನ್ಮದ ಬಾಕಿಯನ್ನು ತೀರಿಸಲು ಅಥವಾ ಋಣವನ್ನು ಮಾಡಿದ ಉಪಕಾರವನ್ನು ಹಿಂಪಡೆಯಲು ಜೀವಿಸುತ್ತೇವೆ ಎನ್ನುತ್ತದೆ.

ರಾಮಾಯಣ ಸಂಬಂಧಗಳನ್ನು ಹೇಗೆ ನಿಭಾಯಿಸಬೇಕೆಂದು ಕಲಿಸಿದರೆ, ಮಹಾಭಾರತವು ಸಂಬಂದಗಳಲ್ಲಿ ಯಾವ ತಪ್ಪನ್ನು ಮಾಡಬಾರದು ಎಂಬುದನ್ನು ಕಲಿಸುತ್ತವೆ. ಜೀವನದ ಪ್ರತಿ ಘಟ್ಟದಲ್ಲೂ ಸಂಬಂಧಗಳು ಸಂಬಂಧಿಕರು ಸ್ನೇಹಿತರು ಬಂದುಗಳ ಜೊತೆಯಲ್ಲಿಯೇ ಬದುಕುವ ನಾವು ಈಗೀಗ ಎಲ್ಲ ಸಂಬಂಧಗಳನ್ನು ಬಿಡುತ್ತಿದ್ದೇವೆಯೇ ಎಂಬ ಕಾಲ ಬಂದ ಹಾಗೆ ಆಗಿತ್ತು. ವೈಜ್ಞಾನಿಕತೆಯ ಹಾವಳಿಯಿಂದ ದೂರ ದೂರಾದ ಸಂಬಂಧಗಳು ಒಂದು ವೈರಾಣುವಿನಿಂದ ಹತ್ತಿರವಾಗುತ್ತಿವೆ. ಮೊದಲು ಮಾತನಾಡಲು ಜೊತೆ ಸಮಯ ಕಳೆಯಲು ಸಮಯವಿರಲಿಲ್ಲ, ಈಗ ಜೊತೆಗೆ ಇರುವುದೇ ಅನಿವಾರ್ಯತೆಯಾಗಿದೆ.

ಮನೆಯಲ್ಲಿಯೇ ಇರೋಣ, ಸುರಕ್ಷಿತವಾಗಿ ಇರೋಣ. ತಾಳ್ಮೆಯಿಂದ ಇರೋಣ ಪ್ರೀತಿಯಿಂದ ಇರೋಣ

ಮಾಧುರಿ

ಅಕ್ಷಯ ತೃತೀಯಾ



ಅಕ್ಷಯ ಅಂದರೆ ಕ್ಷಯವಾಗದ್ದು.  ಹಿಂದು ಧರ್ಮದ ಪ್ರಕಾರ ವೈಶಾಖ ಶುದ್ಧ ತೃತೀಯಾದಂದು ಅಕ್ಷಯ ತೃತೀಯಾ ಹಬ್ಬದ ಆಚರಣೆಯನ್ನು ಮಾಡುತ್ತೇವೆ. ಇಂದಿನ ದಿನ ಏನೇ ಕಾರ್ಯ ಮಾಡಿದರೂ ಶುಭದಾಯಕ ಮತ್ತು ವೃದ್ಧಿಸುತ್ತದೆ ಎಂಬುದು ಪ್ರತೀತಿ.  ಇಂದು ಯಾವ ಕೆಲಸ ಮಾಡಲು ಮುಹೂರ್ತವನ್ನು ನಕ್ಷತ್ರ ಪಂಚಾಗ ನೋಡುವ ಅವಶ್ಯಕತೆ ಇಲ್ಲಿ ಸಾಡೇ ತೀನಿ ಶುಭ ಮುಹೃತಗಳನ್ನು ಅಕ್ಷಯ ತೃತೀಯಾ ಕೂಡ ಒಂದು. 

ಇಂದು ಬಹಳಷ್ಟು ಮಹತ್ವದ ಘಟನೆಗಳು ಘಟಿಸಿದ ದಿನ ಪರಶುರಾಮ ಜಯಂತಿ, ಗಂಗೆಯು ಭೂಮಿಗೆ ಬಂದ ದಿನ, ಬಲರಾಮ ಜಯಂತಿ, ಶ್ರೀ ಕೃಷ್ಣ ಪರಮಾತ್ಮ ಪಾಂಡವರಿಗೆ ಅಕ್ಷಯ ಪಾತ್ರೆ ನೀಡಿದ ದಿನ ಮತ್ತು ಬಸವ ಜಯಂತಿ.  ಈ ದಿನ ಏನೇ ಕಾರ್ಯ ಮಾಡಿದರೂ ಅಕ್ಷಯವಾಗುತ್ತದೆ ಎಂಬ ಪ್ರತೀತಿ. ದೇವರಿಗೆ ಗಂಧ ಲೇಖನ ಮಾಡಿ ನಮ್ಮನ್ನು ತಂಪಾಗಿಡಲು ಪ್ರಾರ್ಥಿಸಲಾಗುತ್ತದೆ, ದೇವರಿಗೆ ಪಾನಕ ಕೋಸಂಬರಿ ಮಜ್ಜಿಗೆಯನ್ನು ಸಮರ್ಪಿಸಿ ವಾತಾವರಣದ ಬೇಗೆಯನ್ನು ತಡೆಯುವ ಶಕ್ತಿ ನೀಡೆಂದು ಬೇಡಿಕೊಂಡು ಇವುಗಳನ್ನು ನಮ್ಮ ಸುತ್ತಮುತ್ತಲಿನ ಜನರಲ್ಲಿ ಹಂಚಿ  ಅವರ ಹಾರೈಕೆಯನ್ನು ಪಡೆಯಲಾಗುತ್ತದೆ.  ಈ ದಿನ ವಸ್ತ್ರದಾನ, ಚಪ್ಪಲಿದಾನ, ಛತ್ರಿ ದಾನಗಳೂ ಮಹತ್ವದ್ದು. ನಮ್ಮ ಸಂಸ್ಕೃತಿಯಲ್ಲಿ ಬರುವ ಹಬ್ಬಗಳು ವೈಜ್ಞಾನಿಕ ಮತ್ತು ದಋಮಿಕ ಮಹತ್ವವನ್ನು ಆಯಾ ಕಾಲಗಳ ಅನುಗುಣವಾಗಿಯೇ ಇರುತ್ತವೆ.

ಬನ್ನಿ ಸ್ನೇಹಿತರೆ ಇಂದು ಎಲ್ಲರಲ್ಲಿ ಭಗವಂತನನ್ನು ಕಾಣೋಣ. ಪ್ರೀತಿಯಿಂದ ಇದ್ದು ಅಕ್ಷಯ ಪ್ರೀತಿಯನ್ನು ಪಡೆಯೋಣ, ಸುಮಧುರ ಮಾತುಗಳನ್ನಾಡಿ ಮಧುರವಾಗಿ ಇರೋಣ, ಸ್ನೇಹದಿಂದ ಇದ್ದು ಸ್ನೇಹಿತರನ್ನು ಅಕ್ಷಯವಾಗಿಸೋಣ, ಎಲ್ಲ ಜೀವಗಳಲ್ಲಿ ಮಮತೆಯನ್ನು ತೋರಿ ವಾತ್ಸಲ್ಯವಂತರಾಗೋಣ, ಬರುವ ಎಲ್ಲ ದುಷ್ಟ ಶಕ್ತಿಗಳೊಂದಿಗೆ ಹೋರಾಡಲು ಧೈರ್ಯವಂತರಾಗೋಣ. ನಮ್ಮ ಸದ್ಭುದ್ದಿಯಿಂದ ಧೀಮಂತರಾಗೋಣ, ಓಳೇಯ ಕೆಲಸಗಳನ್ನು ಮಾಡಿ ಮೇಧಾವಿಗಳೋಣ, ಸಮೃದ್ಧಿಯನ್ನು ಪಡೆಯಲು ಶ್ರಮ ಜೀವಿಗಳಾಗೋಣ.  ಅಭಿವೃದ್ದಿಯನ್ನು ಹೊಂದಲು ಪ್ರವ್ರತ್ತರಾಗೋಣ. 
ಎಲ್ಲರಿಗೂ ಅಕ್ಷಯ ತೃತೀಯಾ ಹಬ್ಬದ ಹಾರ್ದಿಕ ಶುಭಾಶಯಗಳು

ಮಾಧುರಿ

Tuesday, April 14, 2020

ಜೀವನದಲ್ಲಿ ಆಹಾರ ಎಷ್ಟು ಮುಖ್ಯ ಎಷ್ಟು ಬಳಸ ಬೇಕು?

ಜೀವನದಲ್ಲಿ ಮನಷ್ಯ ಅಥವಾ ಯಾವುದೇ ಪ್ರಾಣಿ ಬದುಕಲು ಆಹಾರ ಬಹಳ ಮುಖ್ಯ. ಎಲ್ಲ ವಯಸ್ಸಿನವರಿಗೂ ಬೇರೆ ಬೇರೆ ರೀತಿಯ ಆಹಾರ ಸಮಯ ಸಮಯಕ್ಕೆ ಅವಶ್ಯಕತೆ ಇರುತ್ತದೆ. ಮಾನವ ಆದಿ ಕಾಲದಿಂದಲೂ ತಿನ್ನುವ ಪದಾರ್ಥಗಳನ್ನು ಬೆಳೆದು ಪ್ರಾಣಿಗಳನ್ನು ಹಿಡಿದು ಬೇಯಿಸಿ ಜೊತೆಗೆ ರುಚಿಕರವಾಗಿ ಮಾಡಿಕೊಂಡು ತಿನ್ನುವ ಕಲೆಯನ್ನು ಕಲಿತಿದ್ದಾನೆ.

ಪ್ರಸ್ತುತ ಕೋರೋನಾದಂತಹ ಮಹಾಮಾರಿ ಬಂದಿರುವ ಸಂದರ್ಭದಲ್ಲಿ ಲಾಕ್‌ಡೌನ್‌ ಆಗಿರುವ ಕಾರಣ ಎಲ್ಲರೂ ಮನೆಯಲ್ಲಿರುವುದರಿಂದ ಅನೇಕ ಬಗೆಬಗೆಯ ಪಕ್ವಾನ್ನಗಳನ್ನು ಮಾಡಿಕೊಂಡು ತಿನ್ನುತ್ತಾ ತಮ್ಮ ಸಮಯವನ್ನು ಬಹಳ ಸುಖಮಯವಾಗಿ ನಡೆಸುತ್ತಾ ಇರುವವರು ( ಒಂದು ವರ್ಗದ ಜನರು). ಇನ್ನು ಎಷ್ಟೋ ಜನರಿಗೆ ಸಮಯಕ್ಕೆ ತಿನ್ನಲು ಆಹಾರ ಇಲ್ಲದೇ ಹಸಿವಿನಿಂದ ಸಾಯುವ ಸಂದರ್ಭವು ಬಂದಿದೆ.  
ಮತ
ನನ್ನ ಸ್ನೇಹಿತರಲ್ಲಿ ಬಂಧುಗಳಲ್ಲಿ ಒಂದು ವಿನಂತಿ ನೀವು ಸಂತಸದಿಂದಿರಲಿ ದೇವರು ನಿಮಗೆ ಸದಾ ಸಮೃದ್ಧಿಯಾಗಿಯೇ ಇಟ್ಟಿರಲಿ. ದಯವಿಟ್ಟು ಬದುಕುವುದಕ್ಕಾಗಿ ತಿನ್ನಿರಿ, ತಿನ್ನುವುದಕ್ಕಾಗಿ ಬದುಕಬೇಡಿ.  ಯಾರಿಗೆ ತೊತ್ತು ಬೆಳೆಗಳು ಸರಿಯಾಗಿ ಬೆಳೆಯದೇ ನಾಳೆ ತಿನ್ನಲು ಆಹಾರ ಧಾನ್ಯಗಳೇ ಇಲ್ಲದೇ ಇರಬಹುದಾದ ಪ್ರಸಂಗ ಒದಗ ಬಹುದು. ಹಿತವಾಗಿ ಮಿತವಾಗಿ ಆರೋಗ್ಯಯುತವಾದ ಆಹಾರವನ್ನು ಸೇವಿಸಿರಿ. 

ಕೈಲಾದಷ್ಟು ಆಹಾರದೊರಯದಿರುವವರಿಗೆ ಸಹಾಯ ಮಾಡಿರಿ. ನಿಮ್ಮಲ್ಲಿ ಆಹಾರವನ್ನು ಹಾಳು ಮಾಡಬೇಡಿ. ಮಕ್ಕಳಿಗೆ ಆರೋಗ್ಯಕ್ಕೆ ಹಾನಿಯಾಗುವ ಪದಾರ್ಥಗಳನ್ನು ನೀಡಬೇಡಿ.  ಇದು ಸಂಭ್ರಮದ ಸಮಯವಲ್ಲ ಸಂಕಷ್ಟದ ಸಮಯ. ಜವಾಬ್ದಾರಿಯುತ ನಾಗರೀಕ ವರ್ತನೆ ಇರಲಿ.  ಮನೆಯಲ್ಲಿಯೇ ಇರೋಣ. ಆರೋಗ್ಯವಂತರಾಗಿರೋಣ

Thursday, February 28, 2013

ಕಣ್ತುಂಬ ನಿನ್ನದೇ ಚಂದ್ರವದನ 
ಹೃದಯ ಹೇಳುತಲಿದೆ ನಿನ್ನ ಹೆಸರನ್ನ 
ಮಾಡಿದೆ ನೀನು ನನ್ನ ಹುಚ್ಚನ್ನ 
ಹಾಯ್ ಇಲ್ಲ್ಲಿ ಹೋದವು ಆ ರಾತ್ರಿಗಳು 
ನಿನ್ನ ಸವಿ ಸವಿ ಇಂಪಿನ ಮಾತುಗಳು 
ಮಾಡಿದೆ ನನ್ನ ಹುಚ್ಚನ್ನ 
ಎಂದು ನೀನು ನನ್ನಿಂದ ದೂರಾದೆ
ಏಕೆ ನನ್ನನು ಮರೆತೇ ಹೋದೆ
ನಾನು ಹುಚ್ಚನಾಗುತ್ತ ಹೋದೆ
ನನ್ನ ಮನವ ಕದ್ದು ಹೋದೆ
ನಿನ್ನ ನೆನಪಲ್ಲಿ ಹುಚ್ಚನಾಗಿ ಹೋದೆ
ಹಾಯ್ ಇಲ್ಲ್ಲಿ ಹೋದವು ಆ ರಾತ್ರಿಗಳು
ನಿನ್ನ ಸವಿ ಸವಿ ಇಂಪಿನ ಮಾತುಗಳು
ಮಾಡಿದೆ ನನ್ನ ಹುಚ್ಚನ್ನ
ನೀನು ನನ್ನ ಹತ್ತಿರವಿಲ್ಲ
ನಿನ್ನ ಹೃದಯ ನನ್ನ ಸಮೀಪವಿಲ್ಲ
ತಿಳಿದಿದೆ ಆದರು ಈ ಮನ ಒಪ್ಪುತ್ತಲಿಲ್ಲ
ಮತ್ತೂ ಈ ಮನ ನಿನ್ನ ಕಾಯುತ್ತಲಿದೆ
ನೀ ಒಂದು ದಿನ ಬಂಡೆ ಬರುವೆ ಎನ್ನುತ್ತಲಿದೆ
ಈ ಗುಟ್ಟನ್ನು ನನ್ನ ಮನ ಪಿಸು ಮಾತಿನಲ್ಲಿ ಹೇಳುತ್ತಲಿದೆ
ಮತ್ತೆ ಬರಲಿದೆ ಆ ಸುಂದರ ರಾತ್ರಿಗಳು
ನಿನ್ನ ಸವಿ ಸವಿ ಇಂಪಿನ ಮಾತುಗಳು
ಕಣ್ತುಂಬ ನಿನ್ನದೇ ಚಂದ್ರವದನ
ಹೃದಯ ಹೇಳುತಲಿದೆ ನಿನ್ನ ಹೆಸರನ್ನ
ಮಾಡಿದೆ ನೀನು ನನ್ನ ಹುಚ್ಚನ್ನ
ಹಾಯ್ ಇಲ್ಲ್ಲಿ ಹೋದವು ಆ ರಾತ್ರಿಗಳು
ನಿನ್ನ ಸವಿ ಸವಿ ಇಂಪಿನ ಮಾತುಗಳು
ಮಾಡಿದೆ ನನ್ನ ಹುಚ್ಚನ್ನ

Saturday, October 6, 2012

Hum Dono - Main Zindagi Ka Saath Nibhata - Mohd Rafi





ಜೀವನದ ಜೊತೆಜೊತೆಯಲಿ ನಡೆಯುತಾ ಹೋದೆನು
ಅದು ಕರೆದ ಕಡೆಯಲೆಲ್ಲ ನಡೆಯುತಾ ಹೋದೆನು
ಎಲ್ಲ ಚಿಂತೆಗಳನು ಗಾಳಿಗೆ ತೂರುತಾ ನಡೆದನು
ಅಪಜಯದ ಬಗ್ಗೆ ಅಳುವುದಕ್ಕೆ ಅರ್ಥವಿಲ್ಲವೆಂದೆನು
ಅಪಜಯದಲ್ಲಿ ಸಹ ಸ್ಂಭ್ತಮಿಸುತಿದೆನು||೧||
ಎಲ್ಲ ಚಿಂತೆಗಳನು ಗಾಳಿಗೆ ತೂರುತಾ ನಡೆದನು
ಸಿಕ್ಕಿದ್ದೆ ಸೀರುಂಡೆ ಎಂದುಕೊಂಡೆನು
ಕಳೆದಿದ್ದನ್ನೆಲಲ್ ಮರೆಯುತ್ತಾ ಹೋದೆನು||೨||
ಎಲ್ಲ ಚಿಂತೆಗಳನು ಗಾಳಿಗೆ ತೂರುತಾ ನಡೆದನು
ಸುಖದುಃಖದಲ್ಲಿ ವ್ಯತ್ಯಾಸಮಾಡದೇ ನಡೆದನು
ಮನವನ್ನು ಗಟ್ಟಿಕಲ್ಲನ್ನಾಗಿಸಿ ಕೊಂಡೆನು
ಎಲ್ಲ ಚಿಂತೆಗಳನು ಗಾಳಿಗೆ ತೂರುತಾ ನಡೆದನು

Imtihaan - Ruk Jana Nahin




ಸೋತು ಎಲ್ಲೂ ನಿಲ್ಲ ಬೇಡ ಮುಳ್ಳಿನ ಹಾಸಿಗೆ ಮೇಲೆ ನಡೆದಾಗಲೇ ತಂಪಾದ ನೆರಳು ಸಿಗುವುದು ನಿನಗೆ ಓ ಪಯಣಿಗನೇ
ಸೂರ್ಯನು ನಿಲ್ಲುತ್ತಾನೆ ನಿನ್ನ ಮುಂದೆ ಬಗ್ಗುತ್ತಾನೆ, ಎಂದಾದರೂ ಹೀಗೆ ತಮ್ಮ ಗುಂಗುನಲ್ಲೇ ಯಾರಾದರೂ ಹೋಗುತ್ತಿದ್ದರೆ ಸಂಜೆಗಳು ಸುಖಮಯವಗುತ್ತವೆ ಮತ್ತು ದಿನಗಳು ಕಾಯುವುದರಲ್ಲಿ ಕಳೆಯುತ್ತವೆ
ಜೊತೆಗಾರರಿಲ್ಲದ ಯಾತ್ರೆ ಇದು ನಿನ್ನ ಪರೀಕ್ಷೆ, ಹೀಗೆ ಮುನ್ನಡೆಯುತ್ತಿರು ಧೈರ್ಯವಂತ ಮನಸ್ಸಿನಿಂದ , ಆಗ ನಿನಗೆ ನಿನ್ನ ಗುರಿ ನಿನಗೆ ತನ್ನ ಹಾದಿಯನ್ನು ತೋರಿಸುತ್ತದೆ.
ನಿನ್ನ ಯಶಸ್ಸಿನ ಹಾದಿಯಲ್ಲಿ ನಿನ್ನನ್ನು ಯಾರು ತಡೆಯದಂತೆ ನೋಡಿಕೋ ಪಯಣಿಗನೇ