ಅಕ್ಷಯ ಅಂದರೆ ಕ್ಷಯವಾಗದ್ದು. ಹಿಂದು ಧರ್ಮದ ಪ್ರಕಾರ ವೈಶಾಖ ಶುದ್ಧ ತೃತೀಯಾದಂದು ಅಕ್ಷಯ ತೃತೀಯಾ ಹಬ್ಬದ ಆಚರಣೆಯನ್ನು ಮಾಡುತ್ತೇವೆ. ಇಂದಿನ ದಿನ ಏನೇ ಕಾರ್ಯ ಮಾಡಿದರೂ ಶುಭದಾಯಕ ಮತ್ತು ವೃದ್ಧಿಸುತ್ತದೆ ಎಂಬುದು ಪ್ರತೀತಿ. ಇಂದು ಯಾವ ಕೆಲಸ ಮಾಡಲು ಮುಹೂರ್ತವನ್ನು ನಕ್ಷತ್ರ ಪಂಚಾಗ ನೋಡುವ ಅವಶ್ಯಕತೆ ಇಲ್ಲಿ ಸಾಡೇ ತೀನಿ ಶುಭ ಮುಹೃತಗಳನ್ನು ಅಕ್ಷಯ ತೃತೀಯಾ ಕೂಡ ಒಂದು.
ಇಂದು ಬಹಳಷ್ಟು ಮಹತ್ವದ ಘಟನೆಗಳು ಘಟಿಸಿದ ದಿನ ಪರಶುರಾಮ ಜಯಂತಿ, ಗಂಗೆಯು ಭೂಮಿಗೆ ಬಂದ ದಿನ, ಬಲರಾಮ ಜಯಂತಿ, ಶ್ರೀ ಕೃಷ್ಣ ಪರಮಾತ್ಮ ಪಾಂಡವರಿಗೆ ಅಕ್ಷಯ ಪಾತ್ರೆ ನೀಡಿದ ದಿನ ಮತ್ತು ಬಸವ ಜಯಂತಿ. ಈ ದಿನ ಏನೇ ಕಾರ್ಯ ಮಾಡಿದರೂ ಅಕ್ಷಯವಾಗುತ್ತದೆ ಎಂಬ ಪ್ರತೀತಿ. ದೇವರಿಗೆ ಗಂಧ ಲೇಖನ ಮಾಡಿ ನಮ್ಮನ್ನು ತಂಪಾಗಿಡಲು ಪ್ರಾರ್ಥಿಸಲಾಗುತ್ತದೆ, ದೇವರಿಗೆ ಪಾನಕ ಕೋಸಂಬರಿ ಮಜ್ಜಿಗೆಯನ್ನು ಸಮರ್ಪಿಸಿ ವಾತಾವರಣದ ಬೇಗೆಯನ್ನು ತಡೆಯುವ ಶಕ್ತಿ ನೀಡೆಂದು ಬೇಡಿಕೊಂಡು ಇವುಗಳನ್ನು ನಮ್ಮ ಸುತ್ತಮುತ್ತಲಿನ ಜನರಲ್ಲಿ ಹಂಚಿ ಅವರ ಹಾರೈಕೆಯನ್ನು ಪಡೆಯಲಾಗುತ್ತದೆ. ಈ ದಿನ ವಸ್ತ್ರದಾನ, ಚಪ್ಪಲಿದಾನ, ಛತ್ರಿ ದಾನಗಳೂ ಮಹತ್ವದ್ದು. ನಮ್ಮ ಸಂಸ್ಕೃತಿಯಲ್ಲಿ ಬರುವ ಹಬ್ಬಗಳು ವೈಜ್ಞಾನಿಕ ಮತ್ತು ದಋಮಿಕ ಮಹತ್ವವನ್ನು ಆಯಾ ಕಾಲಗಳ ಅನುಗುಣವಾಗಿಯೇ ಇರುತ್ತವೆ.
ಬನ್ನಿ ಸ್ನೇಹಿತರೆ ಇಂದು ಎಲ್ಲರಲ್ಲಿ ಭಗವಂತನನ್ನು ಕಾಣೋಣ. ಪ್ರೀತಿಯಿಂದ ಇದ್ದು ಅಕ್ಷಯ ಪ್ರೀತಿಯನ್ನು ಪಡೆಯೋಣ, ಸುಮಧುರ ಮಾತುಗಳನ್ನಾಡಿ ಮಧುರವಾಗಿ ಇರೋಣ, ಸ್ನೇಹದಿಂದ ಇದ್ದು ಸ್ನೇಹಿತರನ್ನು ಅಕ್ಷಯವಾಗಿಸೋಣ, ಎಲ್ಲ ಜೀವಗಳಲ್ಲಿ ಮಮತೆಯನ್ನು ತೋರಿ ವಾತ್ಸಲ್ಯವಂತರಾಗೋಣ, ಬರುವ ಎಲ್ಲ ದುಷ್ಟ ಶಕ್ತಿಗಳೊಂದಿಗೆ ಹೋರಾಡಲು ಧೈರ್ಯವಂತರಾಗೋಣ. ನಮ್ಮ ಸದ್ಭುದ್ದಿಯಿಂದ ಧೀಮಂತರಾಗೋಣ, ಓಳೇಯ ಕೆಲಸಗಳನ್ನು ಮಾಡಿ ಮೇಧಾವಿಗಳೋಣ, ಸಮೃದ್ಧಿಯನ್ನು ಪಡೆಯಲು ಶ್ರಮ ಜೀವಿಗಳಾಗೋಣ. ಅಭಿವೃದ್ದಿಯನ್ನು ಹೊಂದಲು ಪ್ರವ್ರತ್ತರಾಗೋಣ.
ಎಲ್ಲರಿಗೂ ಅಕ್ಷಯ ತೃತೀಯಾ ಹಬ್ಬದ ಹಾರ್ದಿಕ ಶುಭಾಶಯಗಳು
ಮಾಧುರಿ
No comments:
Post a Comment