Saturday, April 25, 2020

ಸಂಬಂಧಗಳು



ನಾವು ಹುಟ್ಟಿನಿಂದ ಬರುವ ಸಂಬಂಧಗಳು ಕೆಲವಾದರೆ, ನಾವು ಬೆಳೆಸಿಕೊಳ್ಳುವ ಸಂಬಂಧಗಳು ಇನ್ನು ಕೆಲವು. ಸಂಬಂಧ ಯಾವುದೇ ಇರಲಿ ಅವುಗಳಲ್ಲಿ ಪ್ರೀತಿ ವಿಶ್ವಾಸ ಬಹಳಮುಖ್ಯ.  ದೇವರು ಕೊಟ್ಟ ಸಂಬಂಧಗಳೆಂದರೆ ತಂದೆ-ತಾಯಿ, ರಕ್ತ ಸಂಬಂಧಿಗಳು, ಮದುವೆಯಾದ ನಂತರ ಬರುವುದು ನಾವು ಮಾಡಿಕೊಳ್ಳುವ ಸಂಬಂಧಗಳು ಬಂಧುಗಳು ಬಾಂಧವರು.

ಎಲ್ಲ ರೀತಿಯ ಸಂಬಂಧಗಳಿಗೂ ಅದರದೇ ಆದ ಮಹತ್ವವಿರುತ್ತದೆ. ಏಕೆಂದರೆ ಮನುಷ್ಯ ಸಮಾಜ ಜೀವಿ. ಮನೆಯಲ್ಲಿಯ ಜನರು ಬೇಸರ ಎಂದರೂ ಸ್ನೇಹಿತರಾದರೂ ಇದ್ದೆ ಇರುತ್ತಾರೆ. ಯಾವುದೇ ಜನರ ಸಹವಾಸ ಬೇಡವೆಂದು ಬದುಕುವ  ಗೂಬೆಯಂತೆ ಬದುಕುವ ಜನರು ನೂರಕ್ಕೆ 2-3 ಇರಬಹುದಷ್ಟೆ

ಸಾಮಾಜಿಕವಾಗಿ ಮನುಷ್ಯ ಸಂಗಜೀವಿ ಜನರ ಮಧ್ಯ, ಜನರೊಂದಿಗೇ ಇರುತ್ತಾನೆ, ಸಂಬಂಧಗಳನ್ನು ಬೆಳೆಸುತ್ತಾನೆ ಅವರ ಸಂಪರ್ಕದಿಂದ ಸಂತೋಷ ದುಃಖ ಅನೇಕ ಭಾವನೆಗಳನ್ನೂ ಜೀವಿಸುತ್ತಾನೆ.  ಆಧ್ಯಾತ್ಮಿಕವಾಗಿ ಸಂಬಂಧಗಳನ್ನು ವಿಶ್ಲೇಷಣೆ ಮಾಡಿದಾಗ  ಸಂಬಂಧ ಎಂದರೆ ಬಂಧನದ ಕಾರಣ ಮೋಹದ ಕಾರಣ ಎನ್ನಲಾಗುತ್ತದೆ. ಯಾವುದೇ ವ್ಯಕ್ತಿಯ ಸಂಪರ್ಕದಲ್ಲಿ ನಾವು ಬಂದಿದ್ದೇವೆಯೆಂದರೆ ಅವರಿಗೂ ನಮಗೂ ಋಣಾನುಬಂಧವಿರುತ್ತದೆ. ಹಿಂದಿನ ಜನ್ಮದ ಬಾಕಿಯನ್ನು ತೀರಿಸಲು ಅಥವಾ ಋಣವನ್ನು ಮಾಡಿದ ಉಪಕಾರವನ್ನು ಹಿಂಪಡೆಯಲು ಜೀವಿಸುತ್ತೇವೆ ಎನ್ನುತ್ತದೆ.

ರಾಮಾಯಣ ಸಂಬಂಧಗಳನ್ನು ಹೇಗೆ ನಿಭಾಯಿಸಬೇಕೆಂದು ಕಲಿಸಿದರೆ, ಮಹಾಭಾರತವು ಸಂಬಂದಗಳಲ್ಲಿ ಯಾವ ತಪ್ಪನ್ನು ಮಾಡಬಾರದು ಎಂಬುದನ್ನು ಕಲಿಸುತ್ತವೆ. ಜೀವನದ ಪ್ರತಿ ಘಟ್ಟದಲ್ಲೂ ಸಂಬಂಧಗಳು ಸಂಬಂಧಿಕರು ಸ್ನೇಹಿತರು ಬಂದುಗಳ ಜೊತೆಯಲ್ಲಿಯೇ ಬದುಕುವ ನಾವು ಈಗೀಗ ಎಲ್ಲ ಸಂಬಂಧಗಳನ್ನು ಬಿಡುತ್ತಿದ್ದೇವೆಯೇ ಎಂಬ ಕಾಲ ಬಂದ ಹಾಗೆ ಆಗಿತ್ತು. ವೈಜ್ಞಾನಿಕತೆಯ ಹಾವಳಿಯಿಂದ ದೂರ ದೂರಾದ ಸಂಬಂಧಗಳು ಒಂದು ವೈರಾಣುವಿನಿಂದ ಹತ್ತಿರವಾಗುತ್ತಿವೆ. ಮೊದಲು ಮಾತನಾಡಲು ಜೊತೆ ಸಮಯ ಕಳೆಯಲು ಸಮಯವಿರಲಿಲ್ಲ, ಈಗ ಜೊತೆಗೆ ಇರುವುದೇ ಅನಿವಾರ್ಯತೆಯಾಗಿದೆ.

ಮನೆಯಲ್ಲಿಯೇ ಇರೋಣ, ಸುರಕ್ಷಿತವಾಗಿ ಇರೋಣ. ತಾಳ್ಮೆಯಿಂದ ಇರೋಣ ಪ್ರೀತಿಯಿಂದ ಇರೋಣ

ಮಾಧುರಿ

No comments:

Post a Comment