Friday, June 29, 2012

Anupama - Dheere Dheere Machal





ನಿಧನನಿಧನವಾಗಿ   ಮಿಡಿಯೆ ನನ್ನ ಹೃದಯವೇ , ಯಾರೋ ಬರುವರಿದ್ದಾರೆ
ಹಠ ಮಾಡಿ ಕಾಡದಿರು ನನ್ನ ಹೃದಯವೇ , ಯಾರೋ ಬರುವರಿದ್ದಾರೆ
 
ಅವರ ನಿಲುವಂಗಿಯ ಸುಗಂಧ ಗಾಲಿಯಲ್ಲಿದೆ
ಅವರ ಹೆಜ್ಜೆಗಳ ಸದ್ದು ನನ್ನ ಕಿವಿಯಲ್ಲಿದೆ
ನನ್ನನ್ನು ನಾನು ಅಲಂಕಾರ ಮಾಡಲು ಬಿಡು ಹೃದಯವೇ
ಯಾರೋ ಬರುವರಿದ್ದಾರೆ
 
ಅವರ ನೆರಳು ನನ್ನನ್ನು ಮುಟ್ಟುತ್ತಲಿದೆ
ಮಂಗಳವಾದ್ಯ ನನ್ನ ಹೃದಯದ ಬಳಿಯಲ್ಲಿ ಮೊಳಗುತಿದೆ
ನನ್ನ ಕನಸುಗಳ ಅಂಗಳದಲ್ಲಿ ಪ್ರೀತಿ ಅರಳಿದೆ
ಯಾರೋ ಬರುವರಿದ್ದಾರೆ
 
ಹುಸಿ ಮುನಿಸಿನಿಂದ ಮೊದಲು ಅವರನ್ನು ಕಾಡುವೆ
ನನ್ನ ರಮಿಸಲು ಬಂದಾಗ ಒಪ್ಪಿಕೊಳ್ಳುವೆ
ನನ್ನ ಹೃದಯಕ್ಕೆ ಇದೆ ಹೀಗೆ ಮಾಡುವ ಅಧಿಕಾರ ಕೊಡುವೆ
ಯಾರೋ ಬರುವರಿದ್ದಾರೆ

1 comment: