Thursday, June 28, 2012

ಸಮುದ್ರ

ಸಮುದ್ರವನ್ನು ವರ್ಣಿಸಲು
ಪದಗಳೇ ಸಿಗದು ಆದರೂ
ಒಂದು ಮನಸಿನ ಅನಿಸಿಕೆ 
ನನ್ನ ಹೃದಯಾಂತರಾಳದಲ್ಲಿ

ಸಮುದ್ರದ ಅಲೆಗಳು ಬಂದರೆ
ನೊರೆಹಾಲು ಉಕ್ಕಿ ಬಂದಂತೆ
ಸಮುದ್ರರಾಜನ ವಿಶಾಲತೆ
ನಮ್ಮ ಮನಸ್ಸು ವಿಶಾಲವಾರಿರಲೆಂದು ಸಾರುತ್ತದೆ

ಸಮುದ್ರದಂಚಿನ ಸೂರ್ಯಾಸ್ತ
ಅದನ್ನು ಬಣ್ಣಿಸಲಸಾಧ್ಯ
ಸೂರ್ಯ ಮುಳುಗುವಾಗ
ಸಮುದ್ರದಿಂದ ಒಂದು ದೊಡ್ಡ ಹೊನ್ನಿನ ಚೆಂಡು ಮರೆಯಾದಂತೆ ಅನಿಸಿಕೆ

ನಾವೂ ಕೂಡ ಆ ಚೆಂಡಿನಂತೆ ಮುಳುಗುವಾಸೆ
ಕಡಲತೀರದ ಜೀವನ ಬಲು ಚೆನ್ನ
ಜೀವನದಲ್ಲಿ ಸಮುದ್ರ ನೋಡುವುದು
ಎಂದೆಂದೂ ಮರೆಯಲಾಗದ ರಸನಿಮಿಷ

No comments:

Post a Comment