Thursday, June 28, 2012

Jeeva Daiva


ಪ್ರೀತಿ ಸಿಕ್ಕಿತೆ? ಎಲ್ಲಿದೆ ಎಂದು ಹುಡುಕುತಿತ್ತು ಜೀವ
ಎಲ್ಲೆಲ್ಲಿ ಹುಡುಕಲಿ ಎಲ್ಲಿದೆ ಎಂದು ಹುದುಕುತಿತ್ತು ಜೀವ
ಪ್ರಕೃತಿಯ ಮಡಿಲಲ್ಲಿ ಇದೆಯೇ?
ಅಂಬರದಲ್ಲಿ ಇದೆಯೇ?
ಪಾತಾಳದಲ್ಲಿ ಇದೆಯೇ?
ಕಾಡಿನಲ್ಲಿ ಇದೆಯೇ?
ಊರಿನಲ್ಲಿ ಇದೆಯೇ?
ಎಲ್ಲೂ ಸಿಗಲಿಲ್ಲ ಪ್ರೀತಿ, ಹುಡುಕುತ ಹೊರಟಿತು ಜೀವ.
 
ತಾಯಿ ಮಗುವಿನ ಸಂಭಂಧದಲ್ಲಿ
ಗಂಡ ಹೆಂಡಿರ ನಡುವಿನಲ್ಲಿ
ಅಣ್ಣ ತಮ್ಮಂದಿರ ನಂಟಿನಲ್ಲಿ
ಅಕ್ಕ ತಂಗಿಯರ ಒಡನಾಟದಲ್ಲಿ
ಪ್ರೀಯತಮೆ ಪ್ರಿಯನ ಸಂಗದಲ್ಲಿ
ಎಲ್ಲೂ ನಿಜವಾದ ಪ್ರೀತಿ ಸಿಗಲೇ ಇಲ್ಲ ಎನ್ನುತಿತ್ತು ಜೀವ.
 
ಪ್ರಕೃತಿಯ ಕಣ ಕಣದಲ್ಲೂ ನಾನಿದ್ದೇನೆ ಪ್ರೀತಿಯು ಇದೆ ಎನ್ನುತಿತ್ತು ದೈವ
ಅಂಬರದಲ್ಲಿ ಇದೆ
ಪಾತಾಳದಲ್ಲಿ ಇದೆ
ಕಾಡಿನಲ್ಲಿ ಇದೆ
ನಾಡಿ ನಲ್ಲಿ ಇದೆ
ಎಲ್ಲೆಡೆಯೂ ಪ್ರೀತಿ ತುಂಬಿದೆ ಎನ್ನುತ್ತಿತ್ತು ದೈವ.
 
ತಾಯಿಯ ಕಣ್ಣಿನಲ್ಲಿ ಇದೆ ಮಗುವಿನ ನಗುವಿನಲ್ಲಿ ಇದೆ
ಗಂಡನ ಅಕ್ಕರೆಯಲ್ಲಿ ಇದೆ ಹೆಂಡತಿಯ ಒಲವಿನಲ್ಲಿ ಇದೆ
ಅಣ್ಣನ ಗದರುವಿಕೆಯಲ್ಲಿದೆ ತಮ್ಮನ ಜಗಳದಲ್ಲಿ ಇದೆ
ಅಕ್ಕನ ಬುದ್ದಿ ಮಾತಿನಲ್ಲಿ ಇದೆ ತಂಗಿಯ ಹಠದಲ್ಲಿ ಇದೆ
ಪ್ರಿಯತಮೆಯ ಹುಸಿ ಮುನಿಸಿನಲಿ ಪ್ರಿಯನ ತುಂಟಾಟದಲ್ಲಿ ಇದೆ
ಎಲ್ಲೆಲ್ಲೂ ಪ್ರೀತಿಯೇ ತುಂಬಿದೆ ಎನ್ನುತಿತ್ತು ದೈವ.
 
ಜೀವ ದೈವದ ನಡುವೆ ಮಾತಿಗಿಳಿದಾಗ ಹೀಗೆ ಹೇಳಿತು ದೈವ
ಎಲೈ ಜೀವವೇ ನೀನು ಬರೆ ಪಡೆಯುವ ಪ್ರೀತಿಯನ್ನು ಹುಡುಕುತ್ತ ಇದ್ದಿ ,ಅದಕ್ಕೆ ಅದು ನಿನಗೆ ಸಿಗುತ್ತಿಲ್ಲ.
ಜೀವನದ ಒಂದು ಸತ್ಯ ತಿಳಿಯೋ ಜೀವ, ಪ್ರೀತು ಬರೆ ಪಡೆಯುವ ವಸ್ತುವಲ್ಲ?
ನೀನು ಕೊಡುವ ಪ್ರೀತಿ ಎಲ್ಲೂ ಸಿಗುತ್ತದೆ
ಪ್ರೀತಿಯ ಸಾರ್ಥಕ, ಪಡೆಯುವ ಪ್ರೀತಿಗಿಂತ  ಕೊಡುವ ಪ್ರೀತಿಯಲ್ಲೇ ಇದೆ ಎಂದಿತು ದೈವ

No comments:

Post a Comment