Thursday, June 28, 2012

nanaga bayasuve


ಮುಗಿಲಾಚೆ ಬಾನಿನಲಿ
ರವಿಯ ಹೊಂಬೆಳಕಿನಲಿ
ನವಚೇತನದಲಿ
ನಲಿವ ಹಕ್ಕಿಯಾಗ ಬಯಸುವೆ ನಾ
ಸಾಗರದ ಮಡಿಲಿನಲಿ
ತೊರೆಯ ಹಾಲ್ನೊರೆಯಲಿ
ರಭಸದ ಓಟದಲಿ
ಹರಿದಾಡುವ ಮೀನಾಗ ಬಯಸುವೆ ನಾ
ಮರದಾ ಕೊಂಬೆಯಲಿ
ನಲಿದಾಡುವ ಲತೆಯಲಿ
ದುಂಬಿಯ ನೀರಿಕ್ಷೆಯಲಿ
ಪರಿಮಳದ ಪುಷ್ಪವಾಗ ಬಯಸುವೆ ನಾ
ಬ್ರಹ್ಮನ ಈ ಸೃಷ್ಟಿಯಲಿ
ಪುಣ್ಯತಾಯಿ ಭಾರತಿಯಲಿ
ಪ್ರಕೃತಿದೇವಿಯ ಆಶ್ರಯದಲಿ
ಮಾನವನಾಗ ಬಯಸುವೆ ನಾ

No comments:

Post a Comment