ಸೃಷ್ಟಿಯ ಚೆಲುವಿನಲಿ
ವನಸಿರಿಯ ಮಡಿಲಲಿ
ಜಲಧಾರೆಯ ಸನಿಹದಲಿ
ಪ್ರಕೃತಿದೇವಿಯ ಕಾಣು ಬಾ
ನೀಲಿ ಆಕಾಶದಲಿ
ಸೂರ್ಯನ ಹೊಂಗಿರಣದಲಿ
ಮಂಜಿನ ಹನಿಯಲಿ
ಪ್ರಕೃತಿದೇವಿಯ ಕಾಣು ಬಾ
ಹಕ್ಕಿಗಳ ಇಂಚರದಲಿ
ಹರಿವ ನದಿಯ ನಿನಾದದಲಿ
ರಂಗುರಂಗಿನ ಸುಮದಲಿ
ಪ್ರಕೃತಿದೇವಿಯ ಕಾಣು ಬಾ
ದಟ್ಟವಾದ ಕಾರ್ಮುಗಿಲಲಿ
ಹನಿವ ತುಂತುರು ಮಳೆಯಲಿ
ವಸಂತದ ಹೊಸ ಚಿಗುರಲಿ
ಪ್ರಕೃತಿದೇವಿಯ ಕಾಣು ಬಾ
ವನಸಿರಿಯ ಮಡಿಲಲಿ
ಜಲಧಾರೆಯ ಸನಿಹದಲಿ
ಪ್ರಕೃತಿದೇವಿಯ ಕಾಣು ಬಾ
ನೀಲಿ ಆಕಾಶದಲಿ
ಸೂರ್ಯನ ಹೊಂಗಿರಣದಲಿ
ಮಂಜಿನ ಹನಿಯಲಿ
ಪ್ರಕೃತಿದೇವಿಯ ಕಾಣು ಬಾ
ಹಕ್ಕಿಗಳ ಇಂಚರದಲಿ
ಹರಿವ ನದಿಯ ನಿನಾದದಲಿ
ರಂಗುರಂಗಿನ ಸುಮದಲಿ
ಪ್ರಕೃತಿದೇವಿಯ ಕಾಣು ಬಾ
ದಟ್ಟವಾದ ಕಾರ್ಮುಗಿಲಲಿ
ಹನಿವ ತುಂತುರು ಮಳೆಯಲಿ
ವಸಂತದ ಹೊಸ ಚಿಗುರಲಿ
ಪ್ರಕೃತಿದೇವಿಯ ಕಾಣು ಬಾ
No comments:
Post a Comment