Thursday, June 28, 2012

Madhura Svara

ನನ್ನ ಹೃದಯಾಂತರಾಳದಲಿ
ಮನೆಮಾಡಿದ ದನಿಯ
ಮತ್ತೆ ಮತ್ತೆ ಕೇಳ ಬಯಸುವೆ ನಾ
ಹಾಡಲ್ಲವೆನಲಾರೆ, ಝೇಂಕಾರವೆನಲಾರೆ
ದುಂಬಿಯ ಕಂಡಿಲ್ಲ, ಕೋಗಿಲೆಯ ಕಂಡಿಲ್ಲ
ಮತ್ಯಾವುದರ ಧನಿಯೆಂದು ತಿಳಿಯಲಾಗುತ್ತಿಲ್ಲ
ಏನಿತಿಂಪು ಈ ಧನಿಯು ಮನವೆಲ್ಲಾ ತುಂಬಿಹುದು
ಮತ್ತೇನನೂ ಕೇಳ ಬಯಸುತ್ತಿಲ್ಲವೀ ಮನ
ಯಾವುದೀ ಹೊಸ ಸ್ವರ ಬಲ್ಲೆಯಾ? ಗೆಳತಿ

No comments:

Post a Comment